ಸಿಲಿಕಾನ್ ವ್ಯಾಲಿಯಲ್ಲಿ ಸಮೃದ್ಧಿಯ ದಿನಗಳ ಪುನರಾಗಮನವಾಗಿದೆ. ಹೆದ್ದಾರಿ 101ರ ಆಸುಪಾಸಿನ ಕಚೇರಿಯ ಪರಿಸರ ಮತ್ತೊಮ್ಮೆ ಆಶಾಭಾವದ ಸ್ಟಾರ್ಟ್ ಅಪ್ ಗಳ ಲಾಂಛನದಿಂದ ಅಲಂಕೃತಗೊಂಡಿದೆ. ಸಂಪತ್ತಿನ ಸಂಗ್ರಹ ಹೆಚ್ಚಾಗುತ್ತಿರುವ ಚಿಹ್ನೆಯಾಗಿ ಲೇಕ್ ತಹೋದಂತಹ ರೆಸಾರ್ಟ್ ನಗರಗಳ ರಜಾಕಾಲದಲ್ಲಿ ತಂಗುವ ಫ್ಯಾನ್ಸಿ ಮನೆಗಳ ಬೇಡಿಕೆಯಂತೆ ಬಾಡಿಗೆ ಸಹ ಮುಗಿಲು ಮುಟ್ಟಿದೆ. ತಮ್ಮ ಕಾಲದಲ್ಲಿ ಉತ್ತಮ ಬೆಳವಣಿಗೆ ಕಂಡ ಅರೆವಾಹಕ ಉದ್ಯಮ, ಗಣಕಯಂತ್ರ ಮತ್ತು ಅಂತರ್ಜಾಲ ಸಂಸ್ಥೆಗಳ ಜನ್ಮಸ್ಥಳ ಈ ಬೇ ಪ್ರದೇಶ. ಜಗತ್ತು ಭವಿಷ್ಯದ ಅನುಭವ ಪಡೆಯುವಂತೆ ಮಾಡಿದ ಅದ್ಭುತಗಳಾದ ಸ್ಪರ್ಷದಿಂದ ಕೆಲಸ ಮಾಡುವ ಫೋನ್ ಗಳು, ಕ್ಷಣಮಾತ್ರದಲ್ಲಿ ತೆರೆಯಬಹುದಾದ ಜ್ಞಾನದ ಭಂಡಾರವೇ ಆದ ಗ್ರಂಥಾಲಯಗಳು ಹಾಗೂ ಸಾವಿರಾರು ಮೈಲಿ ದೂರದಿಂದ ನಿಯಂತ್ರಿಸಬಲ್ಲ ಬಲದ ಡ್ರೋನ್, ಇವೆಲ್ಲವೂ ದೊರಕಿದ್ದು ಇಲ್ಲಿನ ಮಾಂತ್ರಿಕರಿಂದಲೇ. 2010 ರಿಂದ ಈಚೆಗಿನ ಅದರ ವ್ಯವಹಾರದ ಪುನಶ್ಚೇತನ ಪ್ರಗತಿ ಚಲನೆಯಲ್ಲಿರುವುದನ್ನು ಸೂಚಿಸುತ್ತದೆ. ಆದ್ದರಿಂದ ಸಿಲಿಕಾನ್ ವ್ಯಾಲಿ ನಿಂತ ನೀರಾಗಿದೆ ಮತ್ತು ನೂತನ ಆವಿಷ್ಕಾರಗಳ ದರ ದಶಕಗಳಿಂದ ಹಿನ್ನಡೆಯಲ್ಲಿದೆ ಎಂದು ಅಲ್ಲಿನ ಕೆಲವರು ತಿಳಿದಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಪೇಪಾಲ್ ನ ಸಂಸ್ಥಾಪಕ ಹಾಗೂ ಫೇಸ್ ಬುಕ್ ನ ಮೊದಲ ಹೊರ ಹೂಡಿಕೆದಾರರಾದ ಪೀಟರ್ ಥಿಯಲ್ ಅವರು ಹೇಳುತ್ತಾರೆ- ಅಮೇರಿಕಾದಲ್ಲಿ ಹೊಸ ಆವಿಷ್ಕಾರ ಅನ್ನುವುದು “ಅತ್ಯಂತ ವಿಪತ್ಕಾರಕ ಸ್ಥಿತಿ ಮತ್ತು ಸಾವಿನ ಮಧ್ಯದಲ್ಲಿದೆ”. ಎಲ್ಲಾ ಕ್ಷೇತ್ರಗಳ ಅಭಿಂತರರೂ ಇದೇ ರೀತಿಯ ನಿರಾಶಾ ಭಾವನೆಯನ್ನು ಹಂಚಿಕೊಳ್ಳುತ್ತಾರೆ. ಹಿಂದಿನ ನೂತನ ಆವಿಶ್ಕಾರಗಳಿಗೆ ಹೋಲಿಸಿದರೆ ಇಂದಿನವುಗಳ ಆರ್ಥಿಕ ಪರಿಣಾಮ ಕಳಾಹೀನವಾಗಿವೆ ಎಂದು ಅರ್ಥಶಾಸ್ತ್ರಜ್ಞರ ಸಣ್ಣ ಆದರೆ ಬೆಳೆಯುತ್ತಿರುವ ಗುಂಪು ಲೆಕ್ಕ ಹಾಕಿದೆ. [ … ] ಸಂಸ್ಕರಣದ ಕಡಿಮೆ ವೆಚ್ಚದಿಂದ ಪ್ರೇರಿತವಾದ ಆವಿಷ್ಕಾರಗಳು ಎಲ್ಲೆಡೆ ಪ್ರಾರಂಭವಾಗುತ್ತಿವೆ. ಗಣಕಯಂತ್ರಗಳು ಸಹಜ ಭಾಷೆಯನ್ನು ಅರ್ಥೈಸಲು ಶುರು ಮಾಡಿವೆ. ಕೇವಲ ದೇಹದ ಚಲನೆಯಿಂದ ಜನರು ವಿಡಿಯೋ ಆಟಗಳನ್ನು ನಿಯಂತ್ರಿಸಬಲ್ಲವರಾಗಿದ್ದಾರೆ—ಈ ತಂತ್ರಜ್ಞಾನ ವ್ಯಾಪಾರ ಕ್ಷೇತ್ರದ ಹೆಚ್ಚಿನ ವಿಭಾಗಗಳಲ್ಲಿ ಸ್ಥಾನ ಪಡೆಯಲಿದೆ. ಮೂರು ಆಯಾಮದ ಮುದ್ರಣ ಸಂಕೀರ್ಣ ವಸ್ತುಗಳ ಸಾಲನ್ನೇ ಮಥಿಸುತ್ತಿದೆ, ಮತ್ತು ಸದ್ಯದಲ್ಲೇ ಮಾನವ ಅಂಗಾಂಶ ಮತ್ತು ಸಾವಯವ ವಸ್ತುಗಳ ಕಡೆ ಅದು ಗಮನ ಹರಿಸಲಿದೆ. ನೂತನ ಆವಿಷ್ಕಾರಗಳ ನಿರಾಶಾವಾದಿ ಇದನ್ನು “ಭವಿಷ್ಯದ ಸುಖ” ಎಂದು ನಿರ್ಲಕ್ಷಿಸಬಹುದು. ಆದರೆ ತಂತ್ರಜ್ಞಾನದ ಪ್ರಭಾವದಿಂದಾದ ಬೆಳವಣಿಗೆ ಒಮ್ಮೆ ಅವನತಿ ಒಮ್ಮೆ ಪ್ರಗತಿಗೆ ವೈರುಧ್ಯದಲ್ಲಿ ತಡೆಯಿಲ್ಲದೆ ಮುಂದುವರಿಯುತ್ತದೆ ಅಥವಾ ನಿರಂತರವಾಗಿ ಅವನತಿ ಹೊಂದುತ್ತದೆ ಎಂಬುದು ಚರಿತ್ರೆ. ಶಿಕಾಗೊ ವಿಶ್ವವಿದ್ಯಾಲಯದ ಚಾಡ್ ಸೈವರ್ಸನ್ ವಿದ್ಯುದೀಕರಣದ ಸಮಯದಲ್ಲಿ ಬೆಳವಣಿಗೆಯ ಉತ್ಪಾದಕತೆ ಅಡೆತಡೆಗಳಿಲ್ಲದೆ ಸಲೀಸಾಗಿರಲಿಲ್ಲವೆಂದು ಬೊಟ್ಟು ಮಾಡುತ್ತಾರೆ. 19ನೇ ಶತಮಾನದ ಕೊನೆಯಿಂದ 20ನೇ ಶತಮಾನದ ಮೊದಲ ದಿನಗಳ ಪ್ರಮುಖ ವಿದ್ಯುತ್ ಆವಿಷ್ಕಾರಗಳ ಕಾಲದಲ್ಲಿ ಬೆಳವಣಿಗೆ ನಿಧಾನವಾಗಿತ್ತು ನಂತರ ಒಮ್ಮೆಗೇ ಚಿಮ್ಮಿತು. | Entry #26966 — Discuss 0 — Variant: Not specifiednone
|